ಕಜುವೊ ಇಷಿಗುರೊ ಬ್ರಿಟನ್‌ನ ಕಾದಂಬರಿಕಾರ,ಕವಿ,ಮತ್ತು ಚಿತ್ರಕತೆಗಾರ.ಅವರಿಗೆ 2017ರ ಸಾಹಿತ್ಯದ ನೊಬೆಲ್‌ ಪುರಸ್ಕಾರ ದೊರೆತಿದೆ. == ಬಾಲ್ಯ ಮತ್ತು ಜೀವನ == ಇಷಿಗುರೊ ಜಪಾನ್‌ನ ನಾಗಸಾಕಿಯಲ್ಲಿ ಜನಿಸಿದರು. ಮತ್ತು ಬ್ರಿಟನ್‌ನಲ್ಲಿ ಬೆಳೆದರು.ಇಷಿಗುರೊ ಐದು ವರ್ಷದ ಬಾಲಕನಾಗಿದ್ದಾಗ ಹೆತ್ತವರು ಬ್ರಿಟನ್‌ಗೆ ವಲಸೆ ಹೋದರು. == ಕಾದಂಬರಿ == ಅವರ ‘ರಿಮೈನ್ಸ್‌ ಆಫ್‌ ದ ಡೇ’ ಎಂಬ ಕಾದಂಬರಿ 1989ರಲ್ಲಿ ಮ್ಯಾನ್‌ ಬೂಕರ್‌ ಪ್ರಶಸ್ತಿಗೆ ಪಾತ್ರವಾಗಿತ್ತು. ಎರಡನೇ ಮಹಾಯುದ್ಧದ ಬಳಿಕದ ಬ್ರಿಟನ್‌ನಲ್ಲಿ ಜೀವಿಸಿದ್ದ ಸೂಕ್ಷ್ಮ ಮನಸ್ಥಿತಿಯ ದಮನಕ್ಕೊಳಗಾದ ಬಾಣಸಿಗನೊಬ್ಬನ ಕತೆ ಹೇಳುವ ಈ ಕಾದಂಬರಿ ಅದೇ ಹೆಸರಿನಲ್ಲಿ ಸಿನಿಮಾ ಆಗಿತ್ತು. ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿತ್ತು. == ಬರಹ == ಇಷಿಗುರೊ ಅವರು ಈಸ್ಟ್‌ ಆ್ಯಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಸೃಜನಶೀಲ ಬರವಣಿಗೆಯನ್ನು ಅಭ್ಯಾಸ ಮಾಡಿದ್ದಾರೆ. *1982ರಲ್ಲಿ ಅವರ ಮೊದಲ ಕಾದಂಬರಿ ‘ಎ ಪೇಲ್‌ ವ್ಯೂ ಆಫ್‌ ದ ಹಿಲ್ಸ್‌’ ಪ್ರಕಟವಾಯಿತು. ಬಳಿಕ ಅವರು ಬರವಣಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡರು. ‌ == ಪ್ರತಿ ಮಾರಾಟ == ದ ರಿಮೈನ್ಸ್‌ ಆಫ್‌ ದ ಡೇ ಮತ್ತು ನೆವರ್‌ ಲೆಟ್‌ ಮಿ ಗೊ ಇಷಿಗುರೊ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳು. ಈ ಎರಡೂ ಕೃತಿಗಳ ಹತ್ತು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇಷಿಗುರೊ ಕವಿಯೂ ಹೌದು. ಜತೆಗೆ ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದಾರೆ == ಕಾದಂಬರಿಗಳು == ಎ ಪೇಲ್‌ ವ್ಯೂ ಆಫ್‌ ಹಿಲ್ಸ್‌ (1982) ಎನ್‌ ಆರ್ಟಿಸ್ಟ್‌ ಆಫ್‌ ದಿ ಫ್ಲೋಟಿಂಗ್‌ ವರ್ಲ್ಡ್‌ (1986) ದ ರಿಮೈನ್ಸ್‌ ಆಫ್‌ ದ ಡೇ (1989) ದ ಅನ್‌ಕನ್ಸೋಲ್ಡ್‌ (1995) ವೆನ್‌ ವಿ ವೆರ್‌ ಆರ್ಫನ್ಸ್‌ (2000) ನೆವರ್‌ ಲೆಟ್‌ ಮಿ ಗೊ (2005) ದ ಬರೀಡ್‌ ಜೈಂಟ್‌ (2015) == ಬಾಹ್ಯ ಕೊಂಡಿಗಳು == ' 2015-05-11 ವೇಬ್ಯಾಕ್ ಮೆಷಿನ್ ನಲ್ಲಿ. , ( 2008). " , . 196". . , ( 2000). " : ". {{ }}: |= () 2005 2006 1989 " ," 2005 " ," ಇಷಿಗುರೊ: ವಿರಾಮ– ಉದ್ವೇಗಗಳ ಕಥನಕಾರ . 2017-10-11 ವೇಬ್ಯಾಕ್ ಮೆಷಿನ್ ನಲ್ಲಿ. ( 2017). == ಉಲ್ಲೇಖಗಳು ==